ಮಧ್ಯಪ್ರದೇಶ:  ಟೊಮೇಟೊ ಬೆಲೆ ದಿನದಿಂದ ದಿನಕ್ಕೆ ಏರುತ್ತಲೆ ಇದೆ ಮತ್ತೆ ಜನರಿಗೆ ಅರ್ಥಿಕ ಹೊರೆಯಾಗಿ ಪರಿಣಮಿಸುತ್ತಿದೆ.

ಈ ಬೆಲೆ ಏರಿಕೆಯ ಪರಿಣಾಮವಾಗಿ ಮನೆಗಳಲ್ಲಿ ಕಲಹವೊಂದು ಸೃಷ್ಟಿಯಾಗುತ್ತಿದೆ. ಮಧ್ಯಪ್ರದೇಶದ ಶಾಹದೋಲ್ ಜಿಲ್ಲೆಯಲ್ಲಿ ಗಂಡ ಮತ್ತು ಹೆಂಡತಿ ಟಿಫಿನ್ ಸರ್ವಿಸ್ ನಡೆಸುತಿದ್ದರು.ಆದರೆ ಅಡುಗೆ ಮಾಡುವಾಗ ಹೆಂಡತಿಯ ಅನುಮತಿ ಇಲ್ಲದೆ ಅಡುಗೆಗೆ  2 ಟೊಮ್ಯಾಟೋಗಳನ್ನು ಪತಿ ಬಳಸಿದ್ದಾರೆ. ಕೇಳದೆ ಅಡುಗೆಗೆ ಬಳಸಿದ್ದ ಪರಿಣಾಮವಾಗಿ ಗಂಡ ಹೆಂಡತಿ ನಡುವೆ ಜಗಳವಾಗಿದೆ. ಈ ವಿಚಾರವಾಗಿ ಮಹಿಳೆ ತನ್ನ ಚಿಕ್ಕ ಮಗುವನ್ನುಕರೆದುಕೊಂಡು ಮನೆ ಬಿಟ್ಟು ಹೋಗಿದ್ದಾಳೆ.

ಇತ್ತ ಪತಿಯು ಪತ್ನಿ ಹಾಗು ಮಗುವನ್ನು ಹುಡುಕಿ ಹುಡುಕಿ ಸಾಕಾಗಿ, ಈಗ ಪತಿ ಪೊಲೀಸರ ಮೊರೆ ಹೋಗಿದ್ದು  ಮೂರು ದಿನದಿಂದ ಪತ್ನಿ ಮಗಳ ಜತೆ ಮಾತನಾಡಿಲ್ಲ. ದಯವಿಟ್ಟು ಅವರನ್ನು ಹುಡುಕಿಕೊಡಿ ಎಂದು ಕಣ್ಣೀರಿಟ್ಟಿದ್ದಾರೆ. ಆದಷ್ಟು ಬೇಗ ಅವರನ್ನು ಹುಡುಕಿ ಮನೆಗೆ ಕಳುಹಿಸುತ್ತೇವೆ ಎಂದು ಪೊಲೀಸರು ಭರವಸೆ ನೀಡಿದ್ದಾರೆ.