ಒಂದೊಂದು ಹೋಟೆಲ್ ಅಥವಾ ಪಬ್‍ಗಳಲ್ಲಿ ಒಂದೊಂದು ರೀತಿಯ ಸೇವೆ ಇರುತ್ತದೆ. ಆ ಸೇವೆಗಳು ಗ್ರಾಹಕರನ್ನು ಸೆಳೆಯುವಂತಿರುತ್ತದೆ. ಕೆಲವೊಬ್ಬರು ರೆಟ್ರೋ ಸ್ಟೈಲ್ ಕೊಟ್ಟರೆ, ಕೆಲವು ಪಬ್‍ಗಳು ಜೈಲು ಲುಕ್ ನಿಂದ ಗ್ರಾಹಕರನ್ನು ಸೆಳೆಯುತ್ತದೆ. ಇನ್ನು ಕೆಲವು ಪಬ್ ಬಾರ್‍ಗಳು ವಿಶೇಷವಾದ ಪೀಠೋಪಕರಣಗಳನ್ನು ಹಾಕಿ ಏನೇನೂ ಕಸರತ್ತು ಮಾಡಿ ಗ್ರಾಹಕರನ್ನು ಸೆಳೆಯಲು ಪ್ರಯತ್ನ ಪಡುತ್ತದೆ. ಆದರೆ ಇವೆಲ್ಲಕ್ಕೂ ವಿಭಿನ್ನವಾದ ಪಬ್ ಒಂದಿದೆ. ಇಲ್ಲಿಗೆ ಎಂಟ್ರಿ ಪಡೆಯಬೇಕು ಎಂದರೆ ನೀವು ಬೆತ್ತಲಾಗಲೇಬೇಕು
ಹೌದು, ಲಂಡನ್ ನಲ್ಲಿ 1847 ಇಸವಿಗೂ ಮೊದಲೇ ಸ್ಥಾಪನೆಗೊಂಡ ‘ಕೋಚ್ ಆಯಂಡ್ ಹಾರ್ಸಸ್’ ಹೆಸರಿನ ಪಬ್ ಒಂದಿದೆ. ಈ ಪಬ್ ಪ್ರವೇಶ ಮಾಡಲು ನೀವು ವಿವಸ್ತ್ರವಾಗಲೇಬೇಕು. ನೀವು ಹೆಣ್ಣಾಗಲಿ ಗಂಡಾಗಲಿ ನಿಮ್ಮ ಸಂಪೂರ್ಣ ಉಡುಪನ್ನು ತೆಗೆದು ಬೀರುವಿನಲ್ಲಿ ಇಟ್ಟು ಈ ಪಬ್ ಪ್ರವೇಶ ಮಾಡಬೇಕು.
ಈ ಪಬ್‍ನಲ್ಲಿ ಮದ್ಯ, ಸಿಗರೇಟು, ಊಟದ ವ್ಯವಸ್ಥೆಯೂ ಇದೆ. ಇದನ್ನು ಸದ್ಯ ಪ್ರಾಯೋಗಿಕವಾಗಿ ಜಾರಿಗೆ ತರಲಾಗುತ್ತಿದೆ. ನಂತರ ಪಬ್‍ಅನ್ನು ಸಂಪೂರ್ಣವಾಗಿ ನ್ಯೂಡ್ ಪಬ್ ಸಾಲಿಗೆ ಸೇರಿಸಲು ನಿರ್ಧರಿಸಲಾಗಿದೆ. ಸದ್ಯ ಕರೋನಾದಿಂದ ಲಾಖ್ ಡೌನ್ ನಿಂದ ಮುಚ್ಚಲಾಗಿದ್ದರೂ ಇನ್ನು ಕೆಲವೇ ತಿಂಗಳಲ್ಲಿ ಮತ್ತೆ ಈ ನ್ಯೂಡ್ ಎಂಟ್ರಿ ಪಬ್ ತೆರೆಯುತ್ತದೆ.