ಶಿವಮೊಗ್ಗ : ತಿಂಗಳ ಸಂಬಳ ಕೊಡಿ ಎಂದು ಕೇಳಿದ್ರೆ ಮಂಚಕ್ಕೆ ಬಾ ಅಂತ ಕರೆಯೋ ತಹಶೀಲ್ದಾರ್. ಹೌದು, ಭದ್ರಾವತಿ ಜಿಲ್ಲೆಯ ತಹಶೀಲ್ದಾರ್ ಎಚ್ ಸಿ ಶಿವಕುಮಾರ್ ವಿರುದ್ಧ ಇಂತಹ ದೂರು ದಾಖಲಾಗಿದೆ.
ಭದ್ರಾವತಿಯ ಸಿದ್ದಾಪುರ ಗ್ರಾಮ ಸಹಾಯಕತಿಯಾಗಿ ಕೆಲಸ ಮಾಡುತ್ತಿದ್ದ ಮಹಿಳೆ ಸಂಬಳ ನೀಡುವಂತೆ ತಹಶೀಲ್ದಾರ್ ಬಳಿ ಮನವಿ ಮಾಡಿಕೊಂಡಿದ್ದಾರೆ. ಈ ವೇಳೆ ತನ್ನೊಂದಿಗೆ ಸಹಕರಿಸಿದರೆ ಮಾತ್ರ ಸಂಬಳ ಮಾಡಿಕೊಡುವುದಾಗಿ ತಹಶೀಲ್ದಾರ್ ಹೇಳಿರುವುದಾಗಿ ನೊಂದ ಮಹಿಳೆ ಆರೋಪಿಸಿದ್ದಾರೆ. ಆ ಮಹಿಳೆ ಭದ್ರಾವತಿ ತಹಶೀಲ್ದಾರ್ ವಿರುದ್ಧ ಲೈಂಗಿಕ ಕಿರುಕುಳ ದೂರು ನೀಡಿದ್ದಾರೆ.
ಪತಿಯ ಅನಾರೋಗ್ಯದಿಂದಾಗಿ ಕೆಲಸ ಮಾಡುತ್ತಿದ್ದ ಈ ನೊಂದ ಮಹಿಳೆಗೆ ಐದಾರು ತಿಂಗಳಿನಿಂದ ವೇತನ ಬಂದಿರಲಿಲ್ಲ. ಈ ಬಗ್ಗೆ ತಹಶೀಲ್ದಾರ್ ಅವರ ಬಳಿ ಮಹಿಳೆ ವೇತನ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದಾರೆ. ಆದರೆ ತಹಶೀಲ್ದಾರ್ ನನ್ನ ಜೊತೆ ಸಹಕರಿಸಿದರೆ, ನಾನು ಹೇಳಿದ ಸ್ಥಳಕ್ಕೆ ಬಂದರೆ ವೇತನ ಬಿಡುಗಡೆ ಮಾಡುವುದಾಗಿ ಹೇಳುತ್ತಾರೆ ಎಂದು ಮಹಿಳೆ ಆರೋಪಿಸಿದ್ದು, ಈ ಬಗ್ಗೆ ತಹಶೀಲ್ದಾರ್ ವಿರುದ್ಧ ಹಳೆನಗರ ಠಾಣೆಯಲ್ಲಿ ದೂರು ಸಹ ದಾಖಲಿಸಿದ್ದಾರೆ.
ಗ್ರಾಮ ಸಹಾಯಕಿಯ ಆರೋಪ ಕೇಳಿ ಬರುತ್ತಿದ್ದಂತೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ತಹಶೀಲ್ದಾರ್ ಅವರನ್ನು ಹುದ್ದೆಯಿಂದ ಬಿಡುಗಡೆಗೊಳಿಸಿ ಆದೇಶಿಸಿದ್ದಾರೆ.