ಬೆಂಗಳೂರು: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರ ಸೇರಿರುವ ನಟಿ ಸಂಜನಾ ಗಲ್ರಾನಿ ಹೆಸರಲ್ಲಿ ಬರೋಬ್ಬರಿ 11 ಬ್ಯಾಂಕ್ ಅಕೌಂಟ್ ಗಳಿವೆ ಎಂಬ ಮಾಹಿತಿ ಹೊರಬಿದ್ದಿದೆ.

ನಟಿ ಸಂಜನಾ ಹೆಸರಲ್ಲಿ ಬರೋಬ್ಬರಿ 11 ಬ್ಯಾಂಕ್ ಅಕೌಂಟ್‍ಗಳಿದ್ದು, 11 ಖಾತೆಗಳಲ್ಲಿ ಈಗ 40 ಲಕ್ಷ ರೂಪಾಯಿ ಇದೆ. ಅರೆಸ್ಟ್ ಆಗುವ ಮೊದಲು ಸಂಜನಾ ಸಾಕಷ್ಟು ಹಣದ ವ್ಯವಹಾರ ನಡೆಸಿದ್ದರು. ಕೆಲವೊಂದು ಖಾತೆಗಳಿಗೆ ವಿದೇಶಗಳಿಂದಲೂ ಹಣ ಜಮೆ ಆಗಿರುವ ಶಂಕೆ ವ್ಯಕ್ತವಾಗುತ್ತಿದೆ. ಹೀಗಾಗಿ ಹಣ ಯಾರು ಹಾಕಿದ್ದಾರೆ ಎಂಬ ಬಗ್ಗೆ ಪೊಲೀಸರು ಮಾಹಿತಿ ಸಂಗ್ರಹಿಸ್ತಿದ್ದು, ಶೀಘ್ರವೇ ಸಂಜನಾ ಬ್ಯಾಂಕ್ ಖಾತೆಗಳು ಫ್ರೀಜ್ ಮಾಡುವ ಸಾಧ್ಯತೆಗಳಿವೆ.

ಡ್ರಗ್ಸ್ ಕೇಸ್ ಬೆನ್ನು ಹತ್ತಿರೋ ಪೊಲೀಸರಿಗೆ ಸಿನಿಲೋಕದ ಡ್ರಗ್ಸ್ ಕೇಸ್‍ಗೆ ಕುರಿತ ಮಾಹಿತಿಯ ಅನ್ವಯ ಬಂಧಿತರಾದ ರಾಗಿಣಿ ಮತ್ತು ಸಂಜನಾ ಅವರ ಜೊತೆ ಬಂಧಿತರಾದ ಆರೋಪಿಗಳ ಮೊಬೈಲ್‍ನಲ್ಲಿ ಸಿಕ್ಕಮಾಹಿತಿ ಪ್ರಕಾರ ಸೆಕ್ಸ್ ದಂಧೆ ನಡೆಯುತ್ತಿರುವ ಶಂಕೆ ವ್ಯಕ್ತವಾಗಿತ್ತು. ಬಂಧಿತ ಆರೋಪಿಗಳ ಮೊಬೈಲ್‍ನಲ್ಲಿ ಸೆಕ್ಸ್ ದಂಧೆ ಸಾಕ್ಷ್ಯ ದೊರಕಿದ್ಯಂತೆ. ಸೆಕ್ಸ್ ದಂಧೆಗಾಗಿಯೇ ಆರೋಪಿಗಳು ವಾಟ್ಸಾಪ್ ಗ್ರೂಪ್ ಮಾಡ್ಕೊಂಡಿದ್ದರು. ಆದರೆ ಡ್ರಗ್ಸ್ ಕೇಸ್ ಬಯಲಾಗ್ತಿದ್ದಂತೆ ವಾಟ್ಸಾಪ್ ಗೂಪ್‍ನ ಡಿಲೀಟ್ ಮಾಡಿದ್ದರು. ಬಂಧಿತ ನಟಿಯರ ಮೊಬೈಲ್‍ನಲ್ಲಿಯೂ ಸಾಕ್ಷ್ಯ ಸಿಕ್ಕಿರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು.