ಮಂಗಳೂರು: ನಟಿ ಹಾಗೂ ನಿರೂಪಕಿ ಅನುಶ್ರೀ ಡ್ರಗ್ಸ್ ಕೇಸ್‍ಗೆ ಸಂಬಂಧಿಸಿದಂತೆ ಸ್ಫೋಟಕ ಸಂಗತಿ ಹೊರಬಿದ್ದಿದೆ. ಮೂರು ಪಕ್ಷಗಳ ಪೈಕಿ ಒಬ್ಬ ಮಾಜಿ ಮುಖ್ಯಮಂತ್ರಿ, ಮತ್ತೋರ್ವ ಮಾಜಿ ಮುಖ್ಯಮಂತ್ರಿಯ ಮಗ ಹಾಗೂ ಕರಾವಳಿಯ ಪ್ರಭಾವಿ ನಾಯಕ ಅನುಶ್ರೀ ರಕ್ಷಣೆಗೆ ನಿಂತಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದೆ.

ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ವಾರ ಮಂಗಳೂರು ಸಿಸಿಬಿ ಪೊಲೀಸರ ವಿಚಾರಣೆಗೆ ಅನುಶ್ರೀ ಹಾಜರಾಗಿದ್ದರು. ಆದರೆ, ಅನುಶ್ರೀ ವಿಚಾರಣೆಯನ್ನಷ್ಟೇ ನಡೆಸಿದ್ದ ಮಂಗಳೂರು ಸಿಸಿಬಿ ಪೊಲೀಸರು ಡೋಪಿಂಗ್ ಟೆಸ್ಟ್ ಯಾಕೆ ಮಾಡಿಸಿಲ್ಲ ಎಂಬ ಪ್ರಶ್ನೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು. ಪ್ರಭಾವಿಗಳ ಒತ್ತಡದಿಂದಲೇ ಡೋಪಿಂಗ್ ಟೆಸ್ಟ್ ಮಾಡಿಲ್ಲವೇ ಎಂಬ ಊಹಾಪೆÇೀಹಗಳು ಹರಿದಾಡುತ್ತಿವೆ.

ಡ್ರಗ್ಸ್ ಪೆಡ್ಲರ್ ಹಾಗೂ ಅನುಶ್ರೀ ಡ್ಯಾನ್ಸ್ ಮಾಸ್ಟರ್ ಕಿಶೋರ್ ಶೆಟ್ಟಿ ಸೇರಿದಂತೆ ಬಂಧಿತ ಎಲ್ಲಾ ಆರೋಪಿಗಳ ಡೋಪಿಂಗ್ ಟೆಸ್ಟ್ ಮಾಡಿಸಿರುವ ಮಂಗಳೂರು ಸಿಸಿಬಿ ಪೊಲೀಸರು, ಅನುಶ್ರೀಯನ್ನೇಕೆ ಡೋಪಿಂಗ್ ಟೆಸ್ಟ್ ಗೆ ಒಳಪಡಿಸಲಿಲ್ಲ ಎಂಬ ಅನುಮಾನ ವ್ಯಕ್ತವಾಗಿತ್ತು.

ಈ ನಡುವೆ ಡ್ರಗ್ಸ್ ಪ್ರಕರಣದಲ್ಲಿ ರಿಯಾಲಿಟಿ ಶೋಗಳ ಖ್ಯಾತ ನಿರೂಪಕಿ ಅನುಶ್ರೀಯ ಬಂಧನವಾಗದಂತೆ `ಶುಗರ್ ಡ್ಯಾಡಿ’ ನೋಡಿಕೊಂಡಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಬಾಂಬ್ ಸಿಡಿಸಿದ್ದಾರೆ. ಅನುಶ್ರೀಗೆ ಏನ್ ಆಗಬೇಕೋ ಅದು ಆಗುತ್ತೆ. ಅನುಶ್ರೀಗೆ ಈಗ ಒಳ್ಳೆಯ ಟೈಮ್ ಇದೆ ಅಷ್ಟೇ. ಆದರೆ, ಇದು ಬಹಳ ದಿನ ಉಳಿಯುವುದಿಲ್ಲ. ಒಂದಲ್ಲಾ ಒಂದು ದಿನ ಸತ್ಯಾಂಶ ಹೊರ ಬರಲಿದೆ ಎಂದು ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಟ್ವೀಟ್ ಮಾಡಿದ್ದಾರೆ.

ಇತ್ತ ಇನ್ನೊಂದು ಕಡೆ ನಿರೂಪಕಿ ಅನುಶ್ರೀ, ಸಿಸಿಬಿ ವಿಚಾರಣೆ ನಡೆಸಿದ್ದ ಮಾತ್ರಕ್ಕೆ ನಾನು ಅಪರಾಧಿ ಅಥವಾ ಆರೋಪಿಯಂತಲ್ಲ. ಈ ವಿಚಾರವಾಗಿ ನನ್ನನ್ನು ಬಿಂಬಿಸಿದ ರೀತಿ ಮನಸ್ಸಿಗೆ ತುಂಬಾ ನೋವು ಉಂಟು ಮಾಡಿದೆ.’ ಎಂದು ಕಣ್ಣೀರು ಹಾಕುತ್ತ ವಿಡಿಯೋ ತುಣುಕನ್ನು ತನ್ನ ಫೇಸ್ ಬುಕ್ ಪೇಜ್ ನಲ್ಲಿ ಅಪ್ಲೋಡ್ ಮಾಡಿದ್ದರು.