ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ಸ್ ಕೇಸ್ನಲ್ಲಿ ಬಂಧನಕ್ಕೊಳಪಟ್ಟಿರುವ ಮಾದಕ ನಟಿ ರಾಗಿಣಿ ದ್ವಿವೇದಿ, ಮೆಡಿಕಲ್ ಟೆಸ್ಟ್ ವೇಳೆ ಖತರ್ನಾಕ್ ಐಡಿಯಾ ಮಾಡಿ ಕೊನೆಗೆ ಸಿಕ್ಕಿಬಿದ್ದಿದ್ದಾರೆ.
ಡ್ರಗ್ಸ್ ದಂಧೆಯಲ್ಲಿ ಸಿಸಿವಿ ವಶದಲ್ಲಿರುವ ರಾಗಿಣಿ ದ್ವಿವೇದಿಯ ಡೋಪಿಂಗ್ ಟೆಸ್ಟಿಗೆ ಕೆಸಿ ಜನರಲ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಲ್ಯಾಬ್ನಲ್ಲಿ ರಾಗಿಣಿಯನ್ನು ಮೂತ್ರ ಪರೀಕ್ಷೆಗೆ ಒಳಪಡಿಸಲಾಗಿತ್ತು. ಆದರೆ ಈ ವೇಳೆ ರಾಗಿಣಿ ದೊಡ್ಡ ಕಿತಾಪಿ ಮಾಡಿದ್ದಾರೆ.
ಲ್ಯಾಬ್ ಟೆಸ್ಟ್ನಲ್ಲಿ ಯೂರಿನ್ ಟೆಸ್ಟ್ ಗಾಗಿ ನಟಿ ರಾಗಿಣಿಯನ್ನು ಕಳುಹಿಸಲಾಗಿತ್ತು. ಆದರೆ ಈ ವೇಳೆ ರಾಗಿಣಿ ಯೂರಿನ್ ಜೊತೆಗೆ ನೀರು ಮಿಕ್ಸ್ ಮಾಡಿ ಕೊಟ್ಟಿದ್ದರು. ರಾಗಿಣಿಯ ಯೂರಿನ್ ಟೆಸ್ಟ್ ವೇಳೆ ರಾಗಿಣಿಯ ಯೂರಿನ್ ರಹಸ್ಯ ಬಯಲಾಗಿದ್ದು ಡಾಕ್ಟರ್ಸ್ ಹಾಗೂ ಪೊಲೀಸರೇ ಹೌಹಾರಿದ್ದಾರೆ.
ಇದರಿಂದ ಸಿಟ್ಟುಗೊಂಡ ವೈದ್ಯರು ಹಾಗೂ ಸಿಸಿಬಿ ಪೊಲೀಸರು ಚೀಟ್ ಮಾಡದಂತೆ ವಾರ್ನಿಂಗ್ ಮಾಡಿ, ಮತ್ತೆ ರಾಗಿಣಿಗೆ ಟೆಸ್ಟ್ ಗೆ ಯೂರಿನ್ ಕೊಡುವಂತೆ ಹೇಳಿದ್ದಾರೆ. ಎರಡನೇ ಬಾರಿ ಸಂಗ್ರಹಿಸಿದ ಯೂರಿನ್ನಲ್ಲಿ ನೀರು ಮಿಕ್ಸ್ ಇಲ್ಲದಿರುವುದನ್ನು ಖಚಿತಪಡಿಸಿಕೊಂಡ ಅಧಿಕಾರಿಗಳು ಬಳಿಕ ನಟಿಯನ್ನು ಕರೆದೊಯ್ದರು. ಒಟ್ಟಿನಲ್ಲಿ ನಟಿ ರಾಗಿಣಿ ಡೋಪಿಂಗ್ ಟೆಸ್ಟ್ ನ ಡೂಪ್ ಅಂತ ಅನ್ಕೊಂಡಿದ್ದರು ಅಂತ ಅನ್ಸುತ್ತೆ. ಆದರೆ ವೈದ್ಯರು ರಾಗಿಣಿಯ ಕತರ್ನಾಕ್ ಐಡಿಯಾವನ್ನು ಬಟಾ ಬಯಲು ಮಾಡಿದ್ದಾರೆ.