ಸ್ಯಾಂಡಲ್‍ವುಡ್ ರಾಕಿಂಗ್ ಸ್ಟಾರ್ ಯಶ್ ಮತ್ತು ಸಿಂಡ್ರೆಲಾ ರಾಧಿಕಾ ಪಂಡಿತ್ ತಮ್ಮ ಮಗನಿಗೆ ಸೂಪರ್ ಆಗಿರುವ ಹೆಸರಿಟ್ಟಿದ್ದಾರೆ. ಕೆಲವು ತಿಂಗಳುಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಯಶ್ ಮಗನ ಹೆಸರಿನ ಕುರಿತು ಭಾರೀ ಚರ್ಚೆ ಆಗುತ್ತಿದ್ದು, ಇದೀಗ ಸೂಪರ್ ಸ್ಪೆಷಲ್ ನೇಮ್ ರಿವೀಲ್ ಆಗಿದೆ.

ಹೌದು, ರಾಕಿಂಗ್ ಜೋಡಿ ತಮ್ಮ ಪುತ್ರನಿಗೆ ‘ಯಥರ್ವ ಯಶ್’ ಎಂದು ಹೆಸರಿಟ್ಟಿದ್ದಾರೆ. ಇದರೊಂದಿಗೆ ಅಭಿಮಾನಿಗಳು ಹಲವು ದಿನಗಳಿಂದ ಕೇಳುತ್ತಿದ್ದ ಪ್ರಶ್ನೆಗೆ ಯಶ್-ರಾಧಿಕಾ ಉತ್ತರ ಕೊಟ್ಟಿದ್ದಾರೆ. ಹಲವರು ಸಾಮಾಜಿಕ ಜಾಲತಾಣ ಪುಟಗಳಲ್ಲಿ ಜ್ಯೂನಿಯರ್ ರಾಕಿ ಬಾಯ್ ಗೆ ಹೆಸರು ಸೂಚಿಸಿದ್ದರು. ಅಂತಿಮವಾಗಿ ಯಶ್ ದಂಪತಿ ಯಥರ್ವ ಎಂದು ಹೆಸರು ಫೈನಲ್ ಮಾಡಿದ್ದಾರೆ. ನಾಮಕರಣದ ವಿಡಿಯೋವನ್ನು ಯಶ್-ರಾಧಿಕಾ ಪ್ರಕಟಿಸಿದ್ದಾರೆ.

ನಾಮಕರಣದ ಈ ಪೋಸ್ಟ್ ಜೊತೆ ಮಗನ ಹೆಸರಿನ ಅರ್ಥವನ್ನೂ ಯಶ್ ತಿಳಿಸಿದ್ದು, ಯಥರ್ವ್ ಎಂದರೆ ‘ನಮ್ಮನ್ನು ಪೂರ್ಣಗೊಳಿಸುವಾತ’ ಎಂದು ಬರೆದಿದ್ದಾರೆ
ಹಾಸನದ ತಮ್ಮ ತೋಟದ ಮನೆಯಲ್ಲೇ ಪರಿಸರದ ಮಧ್ಯೆ ಮನೆ ಮಂದಿ ಸಮ್ಮುಖದಲ್ಲಿ ನಾಮಕರಣ ಕಾರ್ಯಕ್ರಮ ನಡೆದಿದೆ.

ಇನ್ನು ಈ ರಾಕಿಂಗ್ ದಂಪತಿಗಳ ಮೊದಲ ಪುತ್ರಿ ಬೇಬಿ ಐರಾ ಹೆಸರು ಕೂಡ ತುಂಬಾನೇ ಕುತೂಹಲ ಹುಟ್ಟಿಸಿತ್ತು. ಬೆಂಗಳೂರಿನ ತಾಜ್ ಹೊಟೇಲ್‍ನಲ್ಲಿ ಐರಾಳ ನಾಮಕರಣ ನಡೆದಿತ್ತು . ಇದೀಗ ಎರಡನೆ ಮಗನ ಹೆಸರು ಯಥರ್ವ್ ಕೂಡ ಸ್ಪೆಷಲ್ ಆಗಿದೆ.

.