ಕೊಯಂಬತ್ತೂರ್: ನೀವು ಇಷ್ಟು ದಿನ ಇಂದಿರಾ ಕ್ಯಾಂಟೀನ್ ಬಗ್ಗೆ ಕೇಳಿದ್ದೀರಿ. ಆದರೆ ಅಲ್ಲಿ ಕಳಪೆ ಗುಣಮಟ್ಟದ ಊಟ ತಿಂಡಿಯ ಬಗ್ಗೆ ತುಂಬಾ ದೂರುಗಳು ಕೇಳಲ್ಪಿಟ್ಟಿದ್ದವು. ಆದರೆ ತಮಿಳುನಾಡಿನಲ್ಲಿ ಅಮ್ಮ ಕ್ಯಾಂಟೀನ್ ಕಡಿಮೆ ಬೆಲೆಗೆ ಹೆಚ್ಚು ಹಾಗೂ ಉತ್ತಮ ಗುಣಮಟ್ಟದ ಆಹಾರ ಕೊಡುತ್ತಿದೆ.
ಇದೇ ರೀತಿ ಇದೀಗ ‘ಮೋದಿ ಇಡ್ಲಿ’ ಶುರುವಾಗಲಿದೆ. ಬಿಜೆಪಿ ಮುಖಂಡನೋರ್ವ ಸೇಲಂನಲ್ಲಿ ಇಡ್ಲಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಹೆಸರನ್ನು ಇಟ್ಟಿರುವ ಅವರು, 10 ರೂಪಾಯಿಗೆ 4 ಇಡ್ಲಿ ನೀಡಲಿದ್ದಾರೆ. ಹಾಗೂ ಈ ಇಡ್ಲಿ ಅಂಗಡಿಗೆ ಮೋದಿ ಇಡ್ಲಿ ಎಂದೇ ಹೆಸರಿಟ್ಟಿದ್ದಾರೆ.
ಇದು ತಮಿಳುನಾಡಿನ ಬಿಜೆಪಿ ಪ್ರಚಾರ ಘಟಕದ ಉಪಾಧ್ಯಕ್ಷ ಮಹೇಶ್ ಅವರ ಯೋಜನೆಯಾಗಿದ್ದು, ಮೋದಿ ಇಡ್ಲಿ ಸಂಬಂಧಪಟ್ಟ ಪೋಸ್ಟರ್ ಗಳು ಸೇಲಂನಲ್ಲಿ ಇದೀಗ ಎಲ್ಲ ಕಡೆ ರಾರಾಜಿಸುತ್ತಿವೆ. ಪ್ರಾರಂಭದಲ್ಲಿ 22 ಇಡ್ಲಿ ಮಾರಾಟ ಅಂಗಡಿಗಳನ್ನು ತೆರೆಯಲಿದ್ದಾರೆ.
ಬಿಜೆಪಿ ನಾಯಕ ಮಹೇಶ್ ಅವರು ಶೀಘ್ರದಲ್ಲೇ ಸೇಲಂನಲ್ಲಿ ಮೋದಿ ಇಡ್ಲಿ ಮಾರಾಟ ಪ್ರಾರಂಭ ಮಾಡಲಿದ್ದಾರೆ. ಆಧುನಿಕ ಅಡುಗೆ ಸಾಮಗ್ರಿಗಳಿಂದ ಇದನ್ನು ತಯಾರಿಸಲಾಗುತ್ತದೆ. ರುಚಿಕರವಾಗಿ ಇರಲಿದ್ದು, ಆರೋಗ್ಯಕ್ಕೂ ಒಳ್ಳೆಯದು ಎಂದು ಪೋಸ್ಟರ್‍ನಲ್ಲಿ ಉಲ್ಲೇಖಿಸಲಾಗಿದೆ.