By: ಜಯಲಕ್ಷ್ಮಿ ಸಿ ಶೆಟ್ಟಿ
ಬೇಕಾಗುವ ಸಾಮಗ್ರಿ :
ಜೀರಾ ರೈಸ್ : ೨೫೦ ಗ್ರಾಮ್ಸ್
ಮಶ್ರೂಮ್ : ೨೫೦ ಗ್ರಾಮ್ಸ್
ಬಟಾಣಿ. :50ಗ್ರಾಮ್ಸ್
ಕ್ಯಾರಟ್ : 100ಗ್ರಾಮ್ಸ್
ಕೊತ್ತಂಬರಿಸೊಪ್ಪು : 50ಗ್ರಾಮ್ಸ್
ಪುದಿನ : 50ಗ್ರಾಮ್ಸ್
ಶುಂಠಿ ಬೆಳ್ಳುಳ್ಳಿ ಪೇಸ್ಟ್ : 50ಗ್ರಾಮ್ಸ್
ಹಸಿಮೆಣಸಿನಕಾಯಿ : 2ರಿಂದ 3
ಚೆಕ್ಕೆ ಲವಂಗ : 2+ ಸಣ್ಣ ತುಂಡು
ತುಪ್ಪ : 50ಗ್ರಾಮ್ಸ್
ಎಣ್ಣೆ. : 50 ಗ್ರಾಮ್.
ಜೀರಿಗೆ : ಸ್ವಲ್ಪ
ಗೋಡಂಬಿ : 10?ಬೀಜ
ಟೊಮೆಟೊ :1
ನೀರುಳ್ಳಿ. :1
ಲಿಂಬೆಹಣ್ಣು. : 1/2
ಮಾಡುವ ವಿಧಾನ :
ಮೊದಲು ಮಿಕ್ಸಿಯಲ್ಲಿ ಟೊಮೇಟೊ
ಹಸಿ ಮೆಣಸಿನಕಾಯಿ ಶುಂಠಿ ಬೆಳ್ಳುಳ್ಳಿ ಚೆಕ್ಕೆ ಲವಂಗ
ಜೀರಿಗೆ ಸ್ವಲ್ಪ ಕೊತ್ತಂಬರಿ ಸೊಪ್ಪು ಪುದಿನ ಸೊಪ್ಪು, ಗೋಡಂಬಿ (4) ಎಲ್ಲಾ ಹಾಕಿ ಚೆನ್ನಾಗಿ ಮಿಕ್ಸ್ ಮಡ್ಕೊಂಡಿರಬೇಕು ..
ಮುಶುರೂಮ್ ಚೆನ್ನಾಗಿ ತೊಳೆದು ಕಟ್ ಮಾಡಿ..
ಕ್ಯಾರಟ್ ನೀರುಳ್ಳಿ ಸಣ್ಣಗೆ ಕಟ್ ಮದ್ಕೊಂಡಬೇಕು ..
ದಪ್ಪ ತಳದ ಪಾತ್ರೆ ತೆಗೆದುಕೊಂಡು ಅದರಲ್ಲಿ ಎಣ್ಣೆ ಬಿಸಿಯಾದಾಗ ನೀರುಳ್ಳಿಯನ್ನು ಚೆನ್ನಾಗಿ ಫ್ರೈ ಮದ್ಕೊಂಡು ಆಮೇಲೆ ಮತ್ತೆ ಅದಕೆ ತುಪ್ಪ ಹಾಕಿ ಜೀರಿಗೆ ಮತ್ತು ಗೋಡಂಬಿ ಹಾಕಿ ಫ್ರೈ ಆದ ನಂತರ ಅದಕ್ಕೆ ಮಶ್ರೂಮ್ ಹಾಕಿ ಸ್ವಲ್ಪ ಫ್ರೈಮಾಡಿ ಮತ್ತೆ ಬಟಾಣಿ ಕ್ಯಾರಟ್ ಹಾಕಿ ಚೆನ್ನಾಗಿ ಫ್ರೈ ಮಾಡಿ
ಅದಕ್ಕೆ ರುಬ್ಬಿರುವ ಖಾಕಿ ಹಾಕಿ ಸ್ವಲ್ಪ ಫ್ರೈ ಆದಾಗ ತೊಳೆದ ಅಕ್ಕಿ ಹಾಕಿ ಫ್ರೈ ಮಾಡಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಸ್ವಲ್ಪ ಅರಸಿನ ಮತ್ತು ಕಾಳುಮೆಣಸು ಸ್ವಲ್ಪ ಹಾಕಬಹುದು . ಇದಕ್ಕೆ 500 ಎಂ ಎಲ್ ಅಷ್ಟು ನೀರು ಹಾಕಿ .. ಕುದಿ ಬರುವಾಗ ಅದಕ್ಕೆ ಲಿಂಬೆಹಣ್ಣು ಹಿಂಡಿ ಮುಚ್ಚಳ ಇಟ್ಟು ಸಣ್ಣ ಉರಿಯಲ್ಲಿ 15 ನಿಮಿಷ ಬೇಯಿಸಬೇಕು ..
15 ನಿಮಿಷ ನಂತರ ನೋಡಿದಾಗ ನಿಮ್ಮ ಮಶ್ರೂಮ್ ಜೀರಾ ಫ್ರೈಡ್ ರೈಸ್ ರೆಡಿ ಯಾಗಿರುತ್ತದೆ ( ಸ್ವಲ್ಪ ಇನ್ನೂ ಬೇಯಬೇಕಾದರೆ ಮತ್ತೆ ಸ್ವಲ್ಪ ಸಣ್ಣ ಉರಿಯಲ್ಲಿ ಇಡಿ).