By: ಜಯಲಕ್ಷ್ಮಿ ಸಿ ಶೆಟ್ಟಿ

ಬೇಕಾದ ಸಾಮಗ್ರಿ :
ಜೀರಾ ರೈಸ್ :250 ಗ್ರಾಮ್ಸ್
ಹಾಲು :2 ಲೀಟರ್ .
ಸಕ್ಕರೆ 500ಗ್ರಾಮ್ಸ್
ತುಪ್ಪ : 500ಗ್ರಾಮ್
ಗೋಡಂಬಿ :10
ಬಾದಾಮ್ . : 10( ಸಣ್ಣಗೆ ಕಟ್ ಮಾಡಿ )
ದ್ರಾಕ್ಷಿ : ಸ್ವಲ್ಪ
ಏಲಕ್ಕಿ ಪುಡಿ : ಸ್ವಲ್ಪ
ಲವಂಗ :೪

ಮಾಡುವ ವಿಧಾನ :
ಮೊದಲು ಅಕ್ಕಿಯನ್ನು ಚೆನ್ನಾಗಿ ತೊಳೆದು ಅದನ್ನು ಅರ್ಧ ಲೀಟರ್ ಅಷ್ಟು ನೀರಿನಲ್ಲಿ ನೆನೆ ಹಾಕಬೇಕು ಸೇರಿಸಿ ಮೊದಲು ಹಾಲನ್ನು ತಪ್ಪ ತಳದ ಪಾತ್ರೆಯಲ್ಲಿ ಕುದಿಸಬೇಕು .ಅದು ಒಂದು ಕುದಿ ಬರುವಾಗ ನೆನೆಸಿದ ಅಕ್ಕಿಯನ್ನು ನೀರಿನ ಸಮೇತ ಹಾಲಿಗೆ ಸೇರಿಸಿ ಒಂದು ಕುದಿ ಬರುವ ತನಕ ಅದನ್ನು ದೊಡ್ಡ ಉರಿಯಲ್ಲಿಟ್ಟು ತಿರುಗಿಸುತ್ತಾ ಇರಬೇಕು ಸೇರಿಸಿ ನಂತರ ಅದನ್ನು ಸಣ್ಣ ಉರಿಯಲ್ಲಿ ಇಟ್ಟು ಆಗಾಗ ತಿರುಗಿಸಬೇಕು .ಅಕ್ಕಿ ಬೇಯುತ್ತಾ ಬಂದಾಗ ಸಕ್ಕರೆ ಸೇರಿಸಿ .. ( ರುಚಿಗೆ ಬೇಕಾದರೆ ಮತ್ತೆ ಸಕ್ಕರೆ ಸೇರಿಸಿ ) .
ಮಂದ ಉರಿಯಲ್ಲಿ ಮಾಡಿದಾಗ ರುಚಿ ಜಾಸ್ತಿ ( ಮಂದ ಉರಿಯಲ್ಲಿ ಸುಮಾರು ಒಂದು ಗಂಟೆ ) ನಂತರ ಇದಕ್ಕೆ ತುಪ್ಪವನ್ನು ಬಿಸಿಮಾಡಿ ಅದರಲ್ಲಿ ಬಾದಾಮ್ ಗೋಡಂಬಿ ದ್ರಾಕ್ಷಿ. ಲವಂಗವನ್ನು ಉರಿದು ಪಾಯಸಕ್ಕೆ ಸೇರಿಸಿ .ಕೊನೆಗೆ ಏಲಕ್ಕಿ ಪುಡಿ ಹಾಕಿ .. ( ಬೇಕಾದರೆ ಇದಕ್ಕೆ ವೆನ್ನಿಲ್ಲ ಕಸ್ಟರ್ಡ್ ಪೌಡರ್ ಒಂದು ಚಮಚ ಸ್ವಲ್ಪ ತಣ್ಣಗೆ ಹಾಲಿಗೆ ಸೇರಿಸಿ ).
ಸ್ವಲ್ಪ ಕುದಿಸಿ .. ಈಗ ರುಚಿಯಾದ ಜೀರಾ ರೈಸ್ ಖೀರ್ ಸವಿಯಲು ಸಿದ್ದ ..