ನಟ ದರ್ಶನ್ ಬಳ್ಳಾರಿಗ ಜೈಲಿಗೆ ಹೋಸ ನಂತರ ಹೊಸ ಡಿಮ್ಯಾಂಡ್ ಒಂದು ಶುರುವಾಗಿದೆ. ಅಲ್ಲಿದ್ದಂತಹ ಕೈದಿಗಳು ಜೈಲು ಸಿಬ್ಬಂದಿಗೆ ಹೊಸ ಡಿಮ್ಯಾಂಡ್ ಮಾಡಿದ್ದಾರೆ.

ಬೆಂಗಳೂರಿನ ಪರಪ್ಪನ ಅಗ್ರಹಾರದಿಂದ ದರ್ಶನ್ ಫೋಟೋ ವೈರಲ್ ಆದ ಬೆನ್ನಲ್ಲಿಯೇ ನಟನನ್ನು ಬಳ್ಳಾರಿಯ ಜೈಲಿಗೆ ಶಿಫ್ಟ್ ಮಾಡಲಾಗಿದೆ. ದರ್ಶನ್ ಅವರನ್ನು ಬಳ್ಳಾರಿಗೆ ಶಿಫ್ಟ್ ಮಾಡಿದ ನಂತರ ಹೊಸ ಹೊಸ ಸವಾಲುಗಳು ಎದುರಾಗುತ್ತಲೇ ಇವೆ. ಅತ್ತ ವಿಜಯಲಕ್ಷ್ಮಿಗೆ ಪತಿಯನ್ನು ನೋಡುವುದು ಸವಾಲಾದರೆ, ದರ್ಶನ್ ಅವರಿಗೆ ಜೈಲು ಸೆಟ್ ಆಗ್ತಿಲ್ಲ ಎನ್ನಲಾಗಿದೆ. ಪೊಲೀಸರಿಗೆ ಇನ್ನೂ ಒಂದು ಹೊಸ ತಲೆ ನೋವು ಶುರುವಾಗಿದ್ದು ಹೊಸ ಬೆಳವಣಿಗೆ ಒಂದು ಜೈಲಿನಲ್ಲಿ ಕಂಡು ಬಂದಿದೆ. ನಟ ದರ್ಶನ ಬಳ್ಳಾರಿ ಜೈಲಿಗೆ ಬಂದ ಹಿನ್ನಲೆಯಲ್ಲಿ ಅಲ್ಲಿದ್ದಂತಹ ಕೈದಿಗಳಿಂದ ಹೊಸ ಡಿಮ್ಯಾಂಡ್ ಶುರುವಾಗಿದೆ. ನಟ ದರ್ಶನ ಭೇಟಿ ಅವಕಾಶ ಕೊಡಲೇಬೇಕು ಎಂದು ಅಲ್ಲಿರುವ ಕೈದಿಗಳು ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.

ಇತರೇ ಖೈದಿಗಳು ಜೈಲು ಸಿಬ್ಬಂದಿಗೆ ಮನವಿ ಮಾಡುತ್ತಿದ್ದು ಹೇಗಾದರೂ ದರ್ಶನ್ ಅವರನ್ನು ಭೇಟಿ ಮಾಡಲು ಬಿಡಬೇಕು ಎಂದಿದ್ದಾರೆ ಎಂದು ಹೇಳಲಾಗಿದೆ. ಬಳ್ಳಾರಿ ಜೈಲಲ್ಲಿ ಸದ್ಯ 385 ಕ್ಕೂ ಹೆಚ್ಚು ಕೈದಿಗಳಿದ್ದಾರೆ. ದರ್ಶನ್ ಇರೋ ಸೆಲ್ ಎಲ್ಲಿ ಇದೆ ಅಂತ ಬಹಳಷ್ಟು ಕೈದಿಗಳು ಕೇಳುತ್ತಿದ್ದು ಹೇಗಾದರೂ ಸರಿ ನಟನನ್ನು ಭೇಟಿ ಮಾಡಬೇಕು ಎಂದು ಪಟ್ಟು ಹಿಡಿದಿದ್ದಾರಂತೆ.

ನಮಗೂ ದರ್ಶನ್ ಭೇಟಿಗೆ ಅವಕಾಶ ನೀಡಿ ಎಂದು ಕೈದಿಗಳು ಜೈಲು ಸಿಬ್ಬಂದಿ ದುಂಬಾಲು ಬಿದ್ದಿದ್ದು ಉಟ, ಉಪಹಾರ ವಿತರಣೆ ಬಂದ ಜೈಲು ಸಿಬ್ಬಂದಿಗೆ ಇದೇ ಪ್ರಶ್ನೆಯನ್ನು ಪದೇ ಪದೇ ಕೇಳುತ್ತಿದ್ದಾರೆ ಎನ್ನಲಾಗಿದೆ. ಹೊರಗೆ ಹೋದರೆ ದರ್ಶನ್ ಭೇಟಿ ಮಾಡೋಕೆ ಆಗೋದಿಲ್ಲ. ಜೈಲಿನಲ್ಲೇ‌ ದರ್ಶನ್ ಭೇಟಿ ಮಾಡಿಸಿ ಅಂತಾ ಬಹಳಷ್ಟು ಕೈದಿಗಳು ಜೈಲಿನ ಸಿಬ್ಬಂದಿಗೆ ಕಿರಿಕಿರಿ ಮಾಡುತ್ತಿದ್ದಾರೆ ಎನ್ನಲಾಗಿದೆ.

ಈಗಾಗಲೇ 60 ಹೆಚ್ಚು ಖೈದಿಗಳು ದರ್ಶನ್ ಅವರನ್ನು ನೋಡುವ ತವಕ ವ್ಯಕ್ತಪಡಿಸಿದ್ದು, ದರ್ಶನ್ ಭೇಟಿ ಅವಕಾಶ ಕೊಡಿಸಿ ಎಂದು ಮನವಿ ಮಾಡಿದ್ದಾರಂತೆ. ನೀವೆ ಜೈಲಾಧಿಕಾರಿಗಳಿಗೆ ನಮ್ಮ ಕೋರಿಕೆ ತಿಳಿಸಿ ಅಂತ ಸಿಬ್ಬಂದಿ ಮೂಲಕ ಕೈದಿಗಳು ಮನವಿ ಮಾಡುತ್ತಿದ್ದಾರಂತೆ. ಭೇಟಿ ಮಾಡಿಸೋದಕ್ಕೆ ಆಗಿಲ್ಲ ಅಂದರೆ ದರ್ಶನ್ ಸೆಲ್ ಹತ್ತಿರ ಆದರೂ ನಮ್ಮನ್ನ ಶಿಫ್ಟ್ ಮಾಡಿಸಿ ಎಂದು ಮನವಿ ಮಾಡಿದ್ದಾರಂತೆ.

ಪದೇ ಪದೇ ಖೈದಿಗಳ ಮನವಿ ಜೈಲು ಸಿಬ್ಬಂದಿಗೆ ತಲೆನೋವು ತಂದಿದೆ ಎಂದು ಹೇಳಲಾಗಿದೆ. ಮೊದಲೇ ಹೈ ಸೆಕ್ಯುರಿಟಿ ಸೆಲ್​ನಲ್ಲಿ ದರ್ಶನ್ ಅವರನ್ನು ಇಟ್ಟಿದ್ದು ಅವರ ಸೆಲ್​ನಲ್ಲಿ ಕೂಡಾ ಒಬ್ಬರೇ ಇದ್ದಾರೆ ಎನ್ನಲಾಗಿದೆ. ಮಾತನಾಡುವುದಕ್ಕೂ ಯಾರೂ ಇಲ್ಲ ಎನ್ನಲಾಗಿದೆ.