ಸುಶಾಂತ್ ಸಿಂಗ್ ಸಾವಿನ ಪ್ರಕರಣದಲ್ಲಿ ಬೆಳಕಿಗೆ ಬಂದಿರುವ ಮಾದಕ ವಸ್ತುಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್‍ನಲ್ಲಿ ಟಾಪ್ ನಟ ನಟಿಯರಿಗೆ ಸಮನ್ಸ್ ಜಾರಿಯಾಗಿದೆ. ನಂ.1 ನಟಿಯಾಗಿರುವ ಪಡುಕೋಣೆಯ ಡ್ರಗ್ಸ್ ಕುರಿತ ವಾಟ್ಸ್ ಆಪ್ ಸಂದೇಶ ಲೀಕ್ ಆದ ನಂತರ ತನಿಖೆ ಜೋರಾಗಿದ್ದು ದೀಪಿಕಾ ಪಡುಕೊಣೆಗೆ ಪೊಲೀಸರು ನೋಟಿಸ್ ನೀಡಿದ್ದಾರೆ.

ಇನ್ನು ದೀಪಿಕಾ ಪಡುಕೊಣೆ ಜೊತೆಗೆ ಅನೇಕ ಸ್ಟಾರ್ ನಟ-ನಟಿಯರ ಹೆಸರು ಹೊರಬರುವ ಸಾಧ್ಯತೆ ಇದೆ. ಇದರ ಜೊತೆಗೆ ಶ್ರದ್ಧಾ ಕಪೂರ್, ಸಾರಾ ಆಲಿಖಾನ್, ರಿಯಾ ಚಕ್ರವರ್ತಿ ಜೊತೆ ವಾಟ್ಸಾಪ್ ಸಂದೇಶ ನಡೆಸಿದ್ದ ಟಾಲಿವುಡ್ ನ ಬೇಡಿಕೆ ನಟಿ ರಾಕುಲ್ ಪ್ರೀತ್ ಸಿಂಗ್ ಗೂ ಸಮನ್ಸ್ ಜಾರಿಯಾಗಿದೆ.

ಈ ಎಲ್ಲರಿಗೂ ಇನ್ನು ಮೂರು ದಿನದೊಳಗೆ ಹಾಜರಾಗಿ ವಿವರಣೆ ನೀಡುವಂತೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಅಧಿಕಾರಿಗಳು ತಿಳಿಸಿದ್ದಾರೆ. ಒಟ್ಟಿನಲ್ಲಿ ಈ ಡ್ರಗ್ಸ್ ಜಾಳದಲ್ಲಿರುವ ಸ್ಟಾರ್ ನಟ ನಟಿಯರ ಮತ್ತಷ್ಟು ಹೆಸರು ಇನ್ನು ಕೆಳ ದಿನಗಳಲ್ಲಿ ಹೊರ ಬೀಳುವುದರಲ್ಲಿ ನೋ ಡೌಟ್