ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ ಮಾಫಿಯಾದಲ್ಲಿ ದಿನ ಕಳೆದಂತೆ ಒಬ್ಬೊಬ್ಬರ ಹೆಸರು ಬಹಿರಂಗವಾಗ್ತಿದೆ. ಈಗಾಗಲೇ ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿಯ ಮೇಲೆ ಸಿಸಿಬಿ ಗ್ರಿಲ್ ನಡೀತಾನೇ ಇದೆ. ಇದೀಗ ಇತ್ತೀಚೆಗೆ ನಿಧನರಾದ ಮಾಜಿ ಡಾನ್ ಮುತ್ತಪ್ಪ ರೈ ಮನೆ ಮೇಲೂ ಇಂದು ಸಿಸಿಬಿ ದಾಳೆ ನಡೆಸಿದ್ದಾರೆ.
ಮುತ್ತಪ್ಪ ರೈ ಮಗ ರಿಕ್ಕಿ ರೈ ಹೆಸರು ಡ್ರಗ್ ಜಾಲದಲ್ಲಿ ಕೇಳಿಬಂದಿರುವ ಹಿನ್ನೆಲೆಯಲ್ಲಿ ಬಿಡದಿ ಹಾಗೂ ಸದಾಶಿವನಗರಸÀದಾಶಿವನಗರದ ರಾಜಮಹಲ್ ಅಪಾರ್ಟ್‍ಮೆಂಟ್ ಪ್ಲಾಟ್ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಳಗ್ಗೆ 6.30ಕ್ಕೆ ಸಿಸಿಬಿ ಅಧಿಕಾರಿಗಳು ರೇಡ್ ಮಾಡಿದ್ದರು. ಈ ವೇಳೆ ಮನೆ ಮಂದಿ ಯಾರು ಇರಲಿಲ್ಲ ಆದರೆ ಮನೆ ಕೆಲಸದ ಸಿಬ್ಬಂದಿ ಮಾತ್ರ ಇದ್ದರು. ಈ ಫ್ಲಾಟ್ ಪರಿಶೀಲನೆಗೆ ಸಿಸಿಬಿ ಅಧಿಕಾರಿಗಳು ನಿನ್ನೆ ಸರ್ಚ್ ವಾರೆಂಟ್ ಪಡೆದಿದ್ದರು.
ಮುತ್ತಪ್ಪ ರೈಗೆ ಸೇರಿದ್ದ ಎರಡು ಮನೆ ಮೇಲೆ ಎಸಿಪಿ ವೇಣುಗೋಪಾಲ್ ಹಾಗೂ ತಂಡದಿಂದ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ. ಈಗಾಗಲೇ ಬಂಧಿತರಾಗಿರುವ ಕೆಲವು ಡ್ರಗ್ ಪೆಡ್ಲರ್‍ಗಳು ರಿಕ್ಕಿ ರೈ ಜೊತೆಗೆ ಸಂಪರ್ಕ ಹೊಂದಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದ್ದರಿಂದ ದಾಳಿ ನಡೆಸಲಾಗಿದೆ. ದಾಳಿ ವೇಳೆ ಸದಾಶಿವನಗರದಲ್ಲಿ ರಿಕ್ಕಿಯ ರೇಂಜ್ ರೋವರ್ ಕಾರನ್ನು ನಾಲ್ಕು ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ರಿಕ್ಕಿ ರೈಯು ಸ್ಯಾಂಡಲ್ ವುಡ್ ಡ್ರಗ್ ದಂಧೆಯಲ್ಲಿ ಆರೋಪಿಯಾದ ಆದಿತ್ಯ ಆಳ್ವನ ಗೆಳೆಯನಾಗಿದ್ದು, ಆತನ ಜೊತೆ ಹೆಚ್ಚು ಒಡನಾಟ ಹೊಂದಿದ್ದರು ಎನ್ನಲಾಗಿದೆ. ಆದಿತ್ಯ ಆಳ್ವನ ರೆಸಾರ್ಟ್‍ನಲ್ಲಿ ಪಾರ್ಟಿಗಳಲ್ಲಿ ಭಾಗವಹಿಸುತ್ತಿದ್ದ ರಿಕ್ಕಿ ಬೆಂಗಳೂರಿನಿಂದ ಆದಿತ್ಯ ರೈ ಎಸ್ಕೇಪ್ ಆಗಿರುವಾಗ ಆತನಿಗೆ ಸಹಕರಿಸಿದ್ದರು ಎಂಬ ಆರೋಪ ಕೇಳಿಬಂದಿದೆ. ಅಷ್ಟೇ ಅಲ್ಲದೆ, ಕೆಲ ಡ್ರಗ್ ಪೆಡ್ಲರ್‍ಗಳ ಜೊತೆ ಸಂಪರ್ಕವಿರೋ ಹಿನ್ನಲೆ ಪರಿಶೀಲನೆ ನಡೆಸಲಾಗುತ್ತಿದೆ.