ಶೃಂಗೇರಿಯಿಂದ ಎರಡು ಕಿಲೋ ಮೀಟರ್ ದೂರದ ವಿದ್ಯಾರಣ್ಯಪುರದ ಹನುಮಗಿರಿಯಲ್ಲಿ ಶಂಕರಾಚಾರ್ಯರ ಪ್ರತಿಮೆ ಸ್ಥಾಪನೆಯಾಗಿದೆ.
ಐತಿಹಾಸಿಕ ಕ್ಷಣಕ್ಕೆ ಶೃಂಗೇರಿ ಶಾರದಾಂಬಾ ಕ್ಷೇತ್ರ ಸಾಕ್ಷಿಯಾಗಿದೆ. ಜಗದ್ಗುರು ಭಾರತೀ ತೀರ್ಥ ಶ್ರೀಗಳ ಸಂಕಲ್ಪದಂತೆ 32 ಅಡಿಯ ಶಂಕರಾಚಾರ್ಯರ ಮೂರ್ತಿ ಶೃಂಗೇರಿಯಲ್ಲಿ ಲೋಕಾರ್ಪಣೆಯಾಗಿದೆ.
ಜಗದ್ಗುರು ಭಾರತೀ ತೀರ್ಥ ಸ್ವಾಮೀಜಿಗಳು ಶಂಕರಾಚಾರ್ಯರ ಬೃಹತ್ ಮೂರ್ತಿಯನ್ನು ಲೋಕಾರ್ಪಣೆ ಮಾಡಿದ್ದಾರೆ.
ಶೃಂಗೇರಿಯ ಕುಗ್ರಾಮ ವಿದ್ಯಾರಣ್ಯಪುರದಲ್ಲಿ ಎರಡು ಎಕರೆ ವಿಸ್ತೀರ್ಣದಲ್ಲಿ 45 ಕೋಟಿ ವೆಚ್ಚದ 32 ಅಡಿಯ ಸುಂದರ ಮೂರ್ತಿ ಮುಂದಿನ ದಿನಗಳಲ್ಲಿ ಭಕ್ತರ ದರ್ಶನಕ್ಕೆ ದೊರೆಯಲಿದೆ.ಶೃಂಗೇರಿಯಿಂದ ಎರಡು ಕಿಲೋ ಮೀಟರ್ ದೂರದ ವಿದ್ಯಾರಣ್ಯಪುರದ ಹನುಮಗಿರಿಯಲ್ಲಿ ಶಂಕರಾಚಾರ್ಯರ ಪ್ರತಿಮೆ ಸ್ಥಾಪನೆಯಾಗಿದ್ದು, ಇನ್ನೂ ಒಂದು ತಿಂಗಳ ನಂತರ ಭಕ್ತರು ದರ್ಶನ ಪಡೆದುಕೊಳ್ಳಬಹುದಾಗಿದೆ.

ಶಂಕರಾಚಾರ್ಯರ ಮೂರ್ತಿ ಲೋಕಾರ್ಪಣೆಯ ನಂತರ ಭಾರತೀ ತೀರ್ಥ ಸ್ವಾಮೀಜಿ ಹಾಗೂ ಕಿರಿಯ ಸ್ವಾಮೀಜಿ ವಿಧುಶೇಖರ ಸ್ವಾಮೀಜಿಯವರು ವಿಶೇಷ ಪೂಜೆ ಸಲ್ಲಿಸಿದ್ದಾರೆ.ಅದ್ವೈತ ವೇದಾಂತದ ಪ್ರತಿಪಾದಕ ಶಂಕರಾಚಾರ್ಯರು ಸ್ಥಾಪಿಸಿದ ಶೃಂಗೇರಿ ಮಠವು ದೇಶದ ಅತ್ಯಂತ ಮಹತ್ವದ ಧಾರ್ಮಿಕ ಕೇಂದ್ರಗಳಲ್ಲಿ ಒಂದಾಗಿದೆ. ಪ್ರತಿದಿನ ಸಾವಿರಾರು ಭಕ್ತರು ಶೃಂಗೇರಿ ಶಾರದಾಂಬೆಯ ದರ್ಶನ ಪಡೆದುಕೊಳ್ಳುತ್ತಾರೆ. ಹೀಗಾಗಿ ಶೃಂಗೇರಿ ದರ್ಶನಕ್ಕೆ ಆಗಮಿಸುವ ಭಕ್ತರ ತಾಣಗಳಲ್ಲಿ ಶಂಕರಾಚಾರ್ಯರ ನೂತನ ಪ್ರತಿಮೆಯೂ ಸೇರ್ಪಡೆಗೊಂಡಿದೆ.