ಬೆಂಗಳೂರು: ನಗರದೆಲ್ಲೆಡೆ ಕೊರೋನಾ ಮಹಾಮಾರಿಗೆ ಜನರು ತುತ್ತಾಗಿ ನರಕಯಾತನೆ ಅನುಭವಿಸುತ್ತಿರುವ ಸಂದರ್ಭದಲ್ಲಿ ‌ಪುಂಡಾಟರ ಹಾವಳಿಯೂ ಹೆಚ್ಚಾಗಿದೆ. ಎಲ್ಲಿಯವರೆಗೆ ಅಂದ್ರೆ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಅವರ ಮನೆಯ ಹತ್ತಿರವೇ ಬಡಿದಾಟ ನಡೆದಿದೆ. ಹಾಡು ಹಗಲೇ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ.

ಡಾಲರ್ಸ್ ಕಾಲೋನಿಯ ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ ಅವರ ನಿವಾಸದ ಬಳಿಯೇ , ದೊಣ್ಣೆ , ಬೆಲ್ಟ್, ಸ್ಟಿಕ್ ಹಿಡಿದು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಈಗಾಗ್ಲೇ ಹಲವಾರು ಪೊಲೀಸ್ ಸ್ಟೇಷನ್‌ ಗಳು ಕೊರೋನಾ ಸೋಂಕಿನಿಂದಾಗಿ ಸೀಲ್ ಡೌನ್ ಆಗಿವೆ.‌‌ಭದ್ರತಾ ಸಿಬ್ಬಂದಿಗಳ ಕೊರತೆ ಉಂಟಾಗಿದೆ. ಇಂತಹ ಸಂದರ್ಭದಲ್ಲಿ ಈ ರೀತಿಯ ಘಟನೆ ನಡೆದಿದ್ದು, ಇದೀಗ ಸ್ಥಳೀಯ ಪೊಲೀಸರು ಈ ಪುಂಡಾಟ ಮಾಡಿದ ಯುವಕರನ್ನು ಹುಡುಕುತ್ತಿದ್ದಾರೆ.