ನಿತ್ಯಾನಂದ ಸ್ವಾಮಿ ಹೆಸರು ಕೇಳಿದ್ರೆ ನಗುವವರೇ ಹೆಚ್ಚು ಅಂದ್ರೆ ತಪ್ಪಾಗಲ್ಲ.‌ ಆತನ ಮಾತು ವರ್ತನೆ ಎಲ್ಲವೂ ಹಾಸ್ಯಾಸ್ಪದ ವಾಗುತ್ತಿತ್ತು.

ಅತ್ಯಾಚಾರ ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ವಿಚಾರದಲ್ಲಿ ನಿತ್ಯಾನಂದ ಸ್ವಾಮಿಯ ಮೇಲೆ ದೂರು ದಾಖಲಾಗಿತ್ತು. ಗುಜರಾತ್ ನಿಂದ ನಾಪತ್ತೆಯಾಗಿದ್ದ ಇಬ್ಬರು ಸಹೋದರಿಯರು ನಿತ್ಯಾನಂದನ‌ ವಶದಲ್ಲಿದ್ದಾರೆ ಎಂದು ಹೇಳಲಾಗಿತ್ತು. ಇವರ ಪತ್ತೆಗೆ ಪೊಲೀಸರು ಅವಿರತ ಪ್ರಯತ್ನ ಪಟ್ಟಿದ್ದಾರೆ. ಇದೀಗ ಆ ಇಬ್ಬರು ಸಹೋದರಿಯರು ನಿತ್ಯಾನಂದ ತಾನೇ ಸೃಷ್ಟಿಸಿರುವ ಕೈಲಾಸ ರಾಜ್ಯದಲ್ಲಿದ್ದಾರೆ ಎನ್ನಲಾಗಿದೆ.

ಆ ಸಹೋದರಿಯರು ನಿತ್ಯಾನಂದ ಸೃಷ್ಟಿಸಿರುವ “ಚಟ್ನಿ ಮ್ಯೂಸಿಕ್” ಕಲಿಯುತ್ತಿದ್ದಾರಂತೆ. ಇದೇನು ಚಟ್ನಿ ಮ್ಯೂಸಿಕ್ ಅನ್ನೋ ಪ್ರಶ್ನೆ ನಿಮ್ಮಲ್ಲಿ ಕಾಡಿರಬಹುದು. ಕೆರೆಬಿಯನ್ ಸಮುದಾಯ ಮತ್ತು ಭೋಜ್‌ಪುರಿ ಸಂಗೀತವನ್ನು ಮಿಕ್ಸ್ ಮಾಡಿ ನಿತ್ಯಾನಂದ ಸೃಷ್ಟಿಸಿರುವ ಹೊಸ ಬಗೆಯ ಸಂಗೀತ ಚಟ್ನಿ ಮ್ಯೂಸಿಕ್. ಇದರ ನಾಮಧೇಯ ಖುದ್ದು ನಿತ್ಯಾನಂದ ಸ್ವಾಮಿಗಳಿಂದಲೇ ಆಗಿದೆ. ಇದೀಗ ಆ ಸಹೋದರಿಯರನ್ನು ವಾಪಾಸ್ ಕರೆಸಿಕೊಳ್ಳಲು ಪೊಲೀಸರು ಶ್ರಮಿಸುತ್ತಿದ್ದಾರೆ.