ಬೆಂಗಳೂರು: ಯುವಕರ ಜೊತೆ ಪ್ರೀತಿಯ ನಾಟಕವಾಡಿ, ಬಳಿಕ ಸುಲಿಗೆ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್ ಸದಸ್ಯರನ್ನು ಆನೇಕಲ್ ಪೊಲೀಸರು ಬಂಧಿದ್ದಾರೆ.

ಬಂಧಿತರನ್ನು ಮುನೇಂದ್ರ, ನಾಗೇಶ್, ನವೀನ್, ಶಂಶಾಕ್, ಮಹೇಂದ್ರ ಹಾಗೂ ಅಣ್ಣಮ್ಮ ಎಂದು ಗುರುತಿಸಲಾಗಿದೆ.

ಈ ತಂಡ ಯುವಕರಿಗೆ ಕರೆ ಮಾಡಿ, ಯಾರು ಇಲ್ಲದ ನಿರ್ಜನ ಪ್ರದೇಶಕ್ಕೆ ಕರೆಸಿಕೊಂಡು ನಂತರ ಅವರನ್ನು ಹೆದರಿಸಿ ಅವರ ಹತ್ತಿರ ಇದ್ದ ಹಣವನ್ನು ಕಸಿದುಕೊಂಡು ಕಳುಹಿಸುತ್ತಿತ್ತು. ಕಳೆದ ಕೆಲ ದಿನಗಳ ಹಿಂದೆ ಈ ತಂಡ ಆನೇಕಲ್‍ನ ಕಿರಣ್‍ಗೆ ಯುವತಿಯಿಂದ ಕರೆ ಮಾಡಿಸಿ. ಪ್ರೀತಿ ಪ್ರೇಮದ ನಾಟಕವಾಡಿಸಿದ್ದಾರೆ. ನಂತರ ಒಂದು ದಿನ ಯುವತಿ ಕಾಲ್ ಮಾಡಿ ಆತನನ್ನು ನಿರ್ಜನ ಪ್ರದೇಶಕ್ಕೆ ಕರೆಸಿಕೊಂಡಿದ್ದಾಳೆ. ಅಲ್ಲಿ ಈ ತಂಡದ ಯುವಕರು ಕಿರಣ್‍ನನ್ನು ಹೆದರಿಸಿ ಸುಲಿಗೆ ಮಾಡಿದ್ದಾರೆ.

ಈ ಘಟನೆಯ ಕುರಿತು ಕಿರಣ್ ಆನೇಕಲ್ ಪೊಲೀಸರಿಗೆ ದೂರು ನೀಡಿದ್ದು, ಈ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಪೊಲೀಸರು 6 ಮಂದಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.