ಬೆಂಗಳೂರಿನಲ್ಲಿ ತನ್ನನ್ನುದೂರ ಮಾಡಲು ಪ್ರಯತ್ನಿಸುತ್ತಿದ್ದ  ಪ್ರಿಯಕರನಿಗೆ ಚಾಕುವಿನಿಂದ ಇರಿದ ಮಹಿಳೆ, ಬಂಧನ

ಬೆಂಗಳೂರು : ಬೆಂಗಳೂರಿನಲ್ಲಿ ತನ್ನನ್ನುದೂರ ಮಾಡಲು ಪ್ರಯತ್ನಿಸುತ್ತಿದ್ದ  ಪ್ರಿಯಕರನಿಗೆ ಚಾಕುವಿನಿಂದ ಇರಿದ ಮಹಿಳೆ, ಬಂಧನ ಪ್ರಿಯಕರನಿಗೆ ಚಾಕುವಿನಿಂದ ತಿವಿದಿರುವ ಘಟನೆ ಈಜಿಪುರದಲ್ಲಿ ನಡೆದಿದೆ. ಜೋಗೇಶ್ (35) ಪೇಗು ಚಾಕುವಿನಿಂದ ಇರಿತಕ್ಕೆಒಳಗಾದವರು. ಈತನ ಪ್ರೇಯಸಿ ಜುಂತಿದಾಸ್ ಈಕೆಯನ್ನು ಕೊಲೆ ಯತ್ನ ಆರೋಪ ಪ್ರಕರಣದಲ್ಲಿ ವಿವೇಕನಗರ  ಪೊಲೀಸರು ಭಾನುವಾರ ಬಂಧಿಸಿದ್ದಾರೆ.

ಅಸ್ಸಾಂ ಮೂಲದ ಈ ಮಹಿಳೆ ಆಗಲೇ ಮೊದಲ ಪತ್ನಿಯನ್ನು ತ್ಯಜಿಸಿದ್ದು 17 ವರ್ಷದ ಮಗಳು ಇದ್ದಾಳೆ. ಜುಂತಿಯು ಡೇ ಕೇರ್ ನಲ್ಲಿ ಸಹಾಯಕಿ ಯಾಗಿ ಕೆಲಸ  ಮಾಡುತಿದ್ದಳು. ಆಗಾಗ ವಿವೇಕ್ ನಗರದ ಬಾಡಿಗೆ ಮನೆಯಲ್ಲಿ ಭೇಟಿಯಾಗುತಿದ್ದರು ಮಾತು ಜುಂತಿ ಬಳಿ ಹಣ ಪಡೆದಿದ್ದ  , ಜೋಗೇಶ್ ಇತ್ತೀಚಿಗೆ ಅಂತರ ಕಾಯ್ದು ಕೊಂಡಿದ್ದ ಫೋನ್ ಸ್ವೀಕರಿಸುತ್ತಿರಲಿಲ್ಲ ಜೂಲೈ 21 ರಂದು ಮನೆಗೆ ಬಂದಾಗ ಇಬ್ಬರ ನಡೆದ ಮಾತಿನ ಚಕಮಕಿಯಲ್ಲಿ ತನ್ನ ಪ್ರಿಯಕರನಿಗೆ ಚಾಕುವಿನಿಂದ ಇರಿದಿದ್ದಾಳೆ.

ಪೊಲೀಸರ ಪ್ರಕಾರ, , ಜೋಗೇಶ್ ಮತ್ತು ಆತನ ಗೆಳತಿ  ಜುಂತಿದಾಸ್ ಶುಕ್ರವಾರ ಜಗಳವಾಡಿದ್ದಾರೆ. ಕೋಪದ ಭರದಲ್ಲಿ, ಜುಂತಿ ಅಡುಗೆಮನೆಯಿಂದ ಚಾಕುವನ್ನು ಹಿಡಿದು ಜೋಗೇಶ್‌ಗೆ ಇರಿದಿದ್ದಾಳೆ.

ಇದರಿಂದಾಗಿ ಅವನಿಗೆ ತೀವ್ರ ರಕ್ತಸ್ರಾವವಾಯಿತು ಎಂದು ಅವರು ಹೇಳಿದರು.

ನೆರೆಹೊರೆಯವರು ಅವರನ್ನು ಸೇಂಟ್ ಜಾನ್ಸ್ ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ವೈದ್ಯರು ಅವರ ಸ್ಥಿತಿ ಗಂಭೀರವಾಗಿದೆ ಎಂದು ವಿವರಿಸಿದರು.