ಡ್ರಗ್ಸ್ ಹಗರಣದಲ್ಲಿ ಆರೋಪಿ ಸ್ಥಾನದಲ್ಲಿದ್ದು ಸಿಸಿಬಿ ಕಸ್ಟಡಿಯಲ್ಲಿರುವ ಸಂಜನಾ ಗಲ್ರಾನಿ ಅವರು ಮದುವೆ ಆಗಿದ್ದಾರಾ? ಅದು ಕೂಡ ಡಾಕ್ಟರ್ ಅಜೀಜ್ ಪಾಷಾ ಜತೆ ಅನ್ನುವ ವಿಷಯವಾಗಿ ಎಲ್ಲಡೆ ಚರ್ಚೆಯಾಗುತ್ತಿದೆ. ಅದಕ್ಕೆ ಕಾರಣ ಇದೀಗ ವೈರಲ್ ಆಗಿರುವ ಫೋಟೋ.
ಹೌದು, ಅಜೀಜ್ ಪಾಷಾ ಜೊತೆ ಲಿವಿಂಗ್ ಟು ಗೆದರ್ ರಿಲೇಷನ್ ಶಿಪ್ ನಲ್ಲಿ ಇದ್ದಾರೆ ಅನ್ನುವುದು ಸುದ್ದಿಯಾಗಿತ್ತು. ಆದರೆ ಸಂಜನಾ ಅವರು ನನಗೆ ಮದುವೆ ಆಗಿಲ್ಲ ಎಂದೇ ಎಲ್ಲೆಡೆ ಹೇಳುತ್ತಿದ್ದರು. ಆದರೆ ಇದೀಗ ಡ್ರಗ್ಸ್ ಕೇಸ್‍ನಲ್ಲಿ ಸಂಜನಾ ಬಂಧನದ ನಂತರ ಒಂದೊಂದೇ ಅವರಿಗೆ ಸಂಬಂಧಪಟ್ಟ ವಿಡೀಯೋಗಳು, ಫೋಟೋಗಳು ರಿವೀಲ್ ಆಗ್ತಾ ಇದ್ದು ಬಿಸಿ ಬಿಸಿ ಚರ್ಚೆಗೆ ಗ್ರಾಸವಾಗುತ್ತಿದೆ.
ಆದರೆ ಇದೀಗ ಈ ಎಲ್ಲಾ ಊಹಾ ಪೋಹಾಗಳಿಗೂ ಪುಷ್ಠಿ ಕೊಡುವಂತೆ ಅಜೀಜ್ ಪಾಷಾ ಹಾಗೂ ಸಂಜನಾ ಗಲ್ರಾನಿ ಅವರಿಬ್ಬರೂ ಮದುಮಕ್ಕಳ ಉಡುಗೆತೊಟ್ಟು ಅಕ್ಕಪಕ್ಕದಲ್ಲೇ ಕುಳಿತಿರುವ ಫೋಟೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಹೌದು, ಸಂಜನಾ ಅರೆಸ್ಟ್ ಆಗುತ್ತಿದ್ದಂತೆ ಡಾ.ಅಜೀಜ್ ಪಾಷಾ ಜತೆ ಸಂಜನಾ ಆಪ್ತತೆ, ಸಂಜನಾ ಪಾಲ್ಗೊಳ್ಳುತ್ತಿದ್ದ ಎಲ್ಲ ಪಾರ್ಟಿಯಲ್ಲೂ ಆ ವೈದ್ಯ ಪಾಲ್ಗೊಳ್ಳುತ್ತಿದ್ದರು ಅನ್ನುವುದರ ಬಗ್ಗೆ ಹಲವು ಪುರಾವೆಗಳು ಸಿಕ್ಕಿವೆ. ಇದೀಗ ಅವರಿಬ್ಬರೂ ಮದುವೆ ಆಗಿದ್ದಾರೆ ಎನ್ನಲಾದ ಫೋಟೋವೊಂದು ವೈರಲ್ ಆಗಿದ್ದು, ಹಲವು ಪ್ರಶ್ನೆಯನ್ನು ಹುಟ್ಟು ಹಾಕಿದೆ.
ಬಹುಭಾಷಾ ನಟಿ ಸಂಜನಾ ಗಲ್ರಾನಿ ವೈದ್ಯ ಅಜೀಜ್ ಪಾಷಾರನ್ನು ಗುಪ್ತವಾಗಿ ಮದುವೆ ಆಗಿದ್ದಾರಾ? ಅನ್ನು ಪ್ರಶ್ನೆ ಎಲ್ಲೆಡೆ ಆಗುತ್ತಿದೆ. ಗಂಡನ ಬಗ್ಗೆ ಸಂಜನಾ ಯಾಕೆ ವಿಷಯ ಮುಚ್ಚಿಟ್ಟಿದ್ರು, ತಾನು ಇನ್ನೂ ಮದುವೆಯನ್ನೇ ಆಗಿಲ್ಲ ಎಂದಿದ್ದೇಕೆ? ಇದರ ಹಿಂದಿನ ಉದ್ದೇಶವೇನು? ರಿಯಲ್ ಗಂಡನ ಬಗ್ಗೆ ರೀಲ್ ಬಿಟ್ಟಿದ್ಯಾಕೆ? ಎಂದು ಅಭಿಮಾನಿಗಳು, ನೆಟ್ಟಿಗರು ಪ್ರಶ್ನೆಗಳ ಮೇಲೆ ಪ್ರಶ್ನೆ ಹಾಕುತ್ತಿದ್ದಾರೆ.