ಕೋಲ್ಕತ: ಸಂಸಾರದ ಜಗಳ ಕೊಲೆಯಲ್ಲಿ ಕೊನೆ. ಅದು ಕೂಡ ಪತಿಯ ಜನನಾಂಗವನ್ನೇ ಕತ್ತರಿಸಿ ಕೊಲೆ. ಹೌದು, ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಉದ್ರಿಕ್ತ ಮಹಿಳೆಯೊಬ್ಬಳು ಮೀನು ಕತ್ತರಿಸುವ ಚಾಕುವಿನಿಂದ ಪತಿಯ ತಲೆಗೆ ಹಲ್ಲೆ ಮಾಡಿದಲ್ಲದೆ, ಆತನ ಜನನಾಂಗವನ್ನೇ ಕತ್ತರಿಸಿ ಕೊಲೆ ಮಾಡಿರುವ ಘಟನೆ ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯಲ್ಲಿ ನಡೆದಿದೆ

ಪತಿ ಮೊಹ್ಸಿನ್ ಮಲ್ಲಿಕ್ ಹಾಗೂ ಪತ್ನಿ ಮನಿರಾ ನಡುವೆ ಸಾಕಷ್ಟು ಬಾರಿ ಜಗಳ ಆಗಿತ್ತು. ಹಾಗೂ ಈ ದಂಪತಿಗಳಿಗೆ ಇಬ್ಬರು ಗಂಡಿ ಮಕ್ಕಳು ಕೂಡ ಇದ್ದಾರೆ. ಇನ್ನು ಮನಿರಾಳ ಮಾನಸಿಕ ಸ್ಥಿತಿ ಕೂಡ ಸರಿ ಇರಲಿಲ್ಲವೆನ್ನಲಾಗಿದೆ. ಪತಿ ಮೊಹ್ಸಿನ್ ಮಲಗಿರುವ ವೇಳೆ ಈಕೆ ಚಾಕುವಿನಿಂದ ಆತನಿಗೆ ಹಲ್ಲೆ ಮಾಡಿ ಜನನಾಂಗವನ್ನೇ ಕತ್ತರಿಸಿ ಘೊರ ಹತ್ಯೆ ಮಾಡಿದ್ದು, ಈ ಘಟನೆಯು ಪಂಚ್ಲಾ ಪೊಲೀಸ್ ಠಾಣಾ ವ್ಯಾಪ್ತಿಯ ಮಲಿಪುಕುರ್ ಗ್ರಾಮದಲ್ಲಿ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಮೃತನ ಪತ್ನಿ ಮನಿರಾಳನ್ನು ಬಂಧಿಸಲಾಗಿದೆ. ಹಲ್ಲೆ ಮಾಡಲು ಬಳಸಿದ ಚಾಕುವನ್ನು ಸಹ ಆರೋಪಿಯಿಂದ ವಶಕ್ಕೆ ಪಡೆಯಲಾಗಿದೆ.

ಆರೋಪಿಯ ಒಬ್ಬ ಮಗ ಪೊಲೀಸರೊಂದಿಗೆ ಮಾತನಾಡಿದ್ದು ಕೊಲೆಯಾದ ದಿನ ನಮ್ಮ ತಾಯಿ ನಮ್ಮ ಹತ್ತಿರ ಬಂದು , ಬೆಡ್‍ರೂಮ್‍ಗೆ ಹೋಗಿ ನೋಡಿ ನಾನೇನು ಮಾಡಿದ್ದೇನೆ ಎಂದು ಗೊತ್ತಾಗುತ್ತದೆ ಎಂದರು. ಹೋಗಿ ನೋಡುವಷ್ಟರಲ್ಲಿ ನಮ್ಮ ತಂದೆಯ ದೇಹ ಬ್ಲಾಂಕೆಟ್‍ನಲ್ಲಿ ಸುತ್ತಿ ನೆಲದ ಮೇಲೆ ಇಡಲಾಗಿತ್ತು. ಸ್ಥಳದಲ್ಲಿ ತುಂಬಾ ರಕ್ತ ಹರಿದಿತ್ತು ಎಂದಿದ್ದಾರೆ.ಮನಿರಾಗೆ ಮಾನಸಿಕ ಅಸ್ವಸ್ಥತೆ ಬಗ್ಗೆ ಅನೇಕ ಬಾರಿ ವೈದ್ಯರ ಬಳಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೂ ಆಕೆಯ ಆರೋಗ್ಯ ಸುಧಾರಿಸಿರಲಿಲ್ಲವೆನ್ನಲಾಗಿದೆ. ಆದರೆ ಈ ಕೃತ್ಯ ಗ್ರಾಮವನ್ನೇ ನಡುಗಿಸಿದೆ. .