ಬೆಂಗಳೂರು :   ನಗರದ ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ ಎರಡು ಕುಟುಂಬದ ಮಧ್ಯ ನಡೆದ ಗಲಾಟೆಯಲ್ಲಿ ಹಲ್ಲೆಗೆ ಒಳಗಾಗಿದ್ದ ಯುವಕ ಬುಧವಾರ ಸಾವನ್ನಪಿದ್ದರೆ. ಯುವಕನು ಮೂಲತ: ಗೋಪಾಲಪುರ  ಮೂರನೇ ಕ್ರಾಸ್ ಮಹಾವೀರ್ ಮೆಡಿಕಲ್ಸ್ ಹಿಂಭಾಗದಲ್ಲಿ ವಾಸಿಸುತ್ತಿದ್ದನು. ವೃತ್ತಿಯಲ್ಲಿ ಕೂಲಿ ಕಾರ್ಮಿಕನಾಗಿದ್ದು ಮಂಗಳವಾರ ಮಧ್ಯಾಹ್ನ ರಾಮಚಂದ್ರಾಪುರದಲ್ಲಿರುವ ಸಂಬಂಧಿಕರ ಮನೆಗೆ ಹೋಗಿದ್ದರು. ಅಲ್ಲಿ  ಮನೆಯಲ್ಲಿದ್ದ ಸಂಬಂದಿಕರ ಮಹಿಳೆಯನ್ನು ನಿಂದಿಸಿದ್ದರು. ಬಳಿಕ  ಸೋನುಪಾಷಾ ಮನೆಗೆ ತೆರಳಿದ. ಮಹಿಳೆಯು ಗಲಾಟೆ ವಿಷಯವನ್ನು ತನ್ನ ಮನೆಯಲ್ಲಿ ಹೇಳಿಕೊಂಡಿದ್ದರು. ನಂತರ ಮಹಿಳೆಯ ಕುಟುಂಬಸ್ಥರು ಸೋನು ಪಾಷಾ ಮೇಲೆ ಕಬ್ಬಿಣದ ರಾಡಿನಿಂದ ಹಲ್ಲೆ ಮಾಡಿದ್ದಾರೆ. ಈ ವೇಳೆ ಆಸ್ಪತ್ರೆಗೆ ದಾಖಲಾಗಿದ್ದರು, ಆದರೂ ಚಿಕಿತ್ಸೆ ಫಲಕಾರಿಯಾಗದೆ ಸೋನು ಪಾಷಾ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.