ಜಗತ್ತಿನಲ್ಲಿ ಆಗುತ್ತಿರುವ ಅನಾಹುತಗಳು ಸಾಲುತ್ತಿಲ್ಲವೇನೋ, ಮನುಷ್ಯನ ಕ್ರೂರತೆಗೆ ಪ್ರಕೃತಿಯೇ ಮುನಿಸಿಕೊಂಡು ತಕ್ಕ ಪಾಠ ಕಲಿಸುತ್ತಿದೆ. ಆದರೂ ಮನುಷ್ಯ ತನ್ನ ಕ್ರೂರತೆಯನ್ನು ಬಿಡುತ್ತಿಲ್ಲ. ಹೌದು ಹೇಯ ಕೃತ್ಯ ಎಲ್ಲಿಯವರೆಗೆ ಸಾಗಿದೆ ಅಂದರೆ ಕಾಮುಕರು ಪುಟ್ಟ ಮಕ್ಕಳನ್ನೂ ಬಿಡುತ್ತಿಲ್ಲ. ಅದರಲ್ಲಿಯೂ ಈ ಇಸ್ರೇಲ್‍ನಲ್ಲಿ ನಡೆದ ಘಟನೆ ನಿಜಕ್ಕೂ ಬೆಚ್ಚಿ ಬೀಳಿಸುತ್ತದೆ. ಹದಿನಾರು ವರ್ಷದ ಬಾಲಕಿಯನ್ನು ಒಂದಿಬ್ಬರಲ್ಲ ಬರೋಬ್ಬರಿ ಮೂವತ್ತು ಮಂದಿ ಅತ್ಯಾಚಾರಗೈದಿದ್ದಾರೆ.

ಇಸ್ರೇಲ್‍ನ ಎಲಾಟ್‍ನಲ್ಲಿರುವ ಹೋಟೆಲ್ ಒಂದರಲ್ಲಿ ಈ ಹೇಯ ಕೃತ್ಯ ನಡೆದಿದೆ. ಅದೆಂತಹ ನೀಚರು ಅಂದರೆ 16 ವರ್ಷದ ಬಾಲಕಿಯನ್ನು ಹೋಟೆಲ್‍ನ ರೂಂ ಒಂದರಲ್ಲಿ ಕೂಡಿಹಾಕಿ ಒಟ್ಟು 30 ಮಂದಿ ಅತ್ಯಾಚಾರವೆಸಗಿದ್ದಾರೆ. ಒಬ್ಬ ಅತ್ಯಾಚಾರವೆಸಗುವಾಗ ಉಳಿದವರು ತಮ್ಮ ಸರದಿಗಾಗಿ ಕಾದು ಒಬ್ಬರ ನಂತರ ಮತ್ತೊಬ್ಬರು ನೀಚತನ ಮೆರೆದಿದ್ದಾರೆ.

ಪ್ರ್ರಕರಣ ಸಂಬಂಧ ಈವರೆಗೆ ಕೇವಲ ಇಬ್ಬರನ್ನು ಬಂಧಿಸಲಾಗಿದ್ದು, ಇನ್ನೂ 28 ಮಂದಿಗಾಗಿ ಹುಡುಕಾಟ ಮುಂದುವರೆದಿದೆ.ವಾಸ್ತವವಾಗಿ ಈ ಬಾಲಕಿ ಅಲ್ಲಿ ರೂಂ ಬುಕ್ ಮಾಡಿರಲಿಲ್ಲವಂತೆ. ಬದಲಾಗಿ ಮದ್ಯ ಕುಡಿದು ಶೌಚಕ್ಕೆ ಹೋಗಿದ್ದ ಸಂದರ್ಭದಲ್ಲಿ ಈಕೆಯ ಸ್ಥಿತಿ ಕಂಡು ಬಾಲಕಿಯನ್ನು ರೂಂಗೆ ಕರೆದೊಯ್ದು ಅತ್ಯಾಚಾರವೆಸಗಿದ್ದಾರೆ.

ಆಗಸ್ಟ್ 14 ರಂದು ಬಾಲಕಿ ಪೋಲೀಸ್ ಠಾಣೆಗೆ ದೂರು ನೀಡಿದಾಗ ಈ ವಿಚಾರ ಬೆಳಕಿಗೆ ಬಂದಿದೆ.ಇನ್ನು ಇಸ್ರೇಲ್ ಪತ್ರಿಕೆ ಹರೇಟ್ಸ್ ಅನ್ವಯ ಅತ್ಯಾಚಾರದಲ್ಲಿ ಶಾಮೀಲಾದ ಕೆಲ ಮಂದಿ ಅತ್ಯಾಚಾರದ ವಿಡಿಯೋವನ್ನೂ ತಮ್ಮ ಮೊಬೈಲ್ ಫೋನ್‍ನಲ್ಲಿ ಸೆರೆ ಹಿಡಿದಿದ್ದಾರೆಂದಿದೆ. ಈ ವಿಡಿಯೋ ಆಧಾರದಲ್ಲೇ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆನ್ನಲಾಗಿದೆ.

ಈ ಸಂಬಂಧ ತನಿಖೆ ನಡೆಸುತ್ತಿರುವ ಪೋಲೀಸರು ಆ ಬಾಲಕಿ ಹೊಟೇಲ್‍ನ ಗೆಸ್ಟ್ ಆಗಿರಲಿಲ್ಲ. ಆಕೆ ಅಲ್ಲಿ ಮದ್ಯ ಸೇವಿಸಿದ ಬಳಿಕ ಬಾತ್‍ರೂಂ ಬಳಸಲು ತೆರಳಿದ್ದಳು. ಆದರೆ ಬಾಲಕಿಯ ಪರಿಸ್ಥಿತಿ ಕಂಡು ಇವರೆಲ್ಲರೂ ಸೇರಿ ಆಕೆಯನ್ನು ಕೋಣೆಗೊಯ್ದಿದ್ದಾರೆಂದಿದ್ದಾರೆ. ಇನ್ನು ಪ್ರಕರಣ ಸಂಬಂಧ ಬಂಧಿಯಾಗಿರುವ ಮತ್ತೊಬ್ಬ ಆರೋಪಿ ಘಟನೆ ಸಂಬಂಧ ಮಾಹಿತಿ ನೀಡುತ್ತಾ, ಬಾಲಕಿಯ ಕೋಣೆ ಹೊರಗೆ ಎಲ್ಲರೂ ತಮ್ಮ ಸರದಿ ಯಾವಾಗ ಬರುತ್ತದೆ ಎಂದು ಸಾಲಿನಲ್ಲಿ ನಿಂತು ಕಾಯುತ್ತಿದ್ದೆವೆಂದಿದ್ದಾನೆ.ಸದ್ಯ ಅಧಿಕಾರಿಗಳು ಬಾಲಕಿಯ ವೈದ್ಯಕೀಯ ವರದಿಗಾಗಿ ಕಾಯುತ್ತಿದ್ದಾರೆ.