ಬೆಂಗಳೂರು : ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ರೈಲು ಸಂಚಾರದ ಮೇಲೆ ಅವಲಂಬಿತರಾಗುವವರ ಸಂಖ್ಯೆ ದಿನೇ ದಿನೆ ಹೆಚ್ಚಾಗುತ್ತಿದೆ. ಹೊಸ ಹಳದಿ ಮಾರ್ಗಕ್ಕೂ ಮೊದಲೇ BMRCL ಹಸಿರು ಮೆಟ್ರೋ ವಿಸ್ತರಣೆ ಮಾರ್ಗದಲ್ಲಿ ಮೆಟ್ರೋ ರೈಲು ಓಡಿಸಲು ಸಜ್ಜಾಗಿದೆ. ಈ ಮಾರ್ಗದಲ್ಲಿ ವಾಣಿಜ್ಯ ಕಾರ್ಯಾಚರಣೆಗೆ ಕೊನೆಗೂ ಮಹೂರ್ತ ಫಿಕ್ಸ್ ಮಾಡುವ ಮೂಲಕ ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದೆ.
ನಮ್ಮ ಮೆಟ್ರೋ ಹಸಿರು ಮಾರ್ಗವನ್ನು ತುಮಕೂರು ಕಡೆಗೆ ನಾಗಸಂದ್ರದಿಂದ ಮಾದಾವರ ವರೆಗೆ ವಿಸ್ತರಣೆ ಮಾಡಲಾಗಿದೆ. ಇತ್ತೀಚೆಗೆ CMRS ತಂಡ ಪರಿಶೀಲಿಸಿ ಸುರಕ್ಷತೆ ಖಚಿತ ಪಡಿಸಿತ್ತು. ಇದರ ಬೆನ್ನಲ್ಲೆ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಇದೇ ಅಕ್ಟೋಬರ್ ಅಂತ್ಯಕ್ಕೆ ಅಂದರೆ ಇನ್ನೊಂದು ವಾರದಲ್ಲಿ ಈ ವಿಸ್ತರಣೆ ಮಾರ್ಗದಲ್ಲಿ ರೈಲು ಕಾರ್ಯಾಚರಣೆ ತೀರ್ಮಾನಿಸಿದೆ.
ಈ ಕುರಿತು ಅಧಿಕೃತವಾಗಿ ಬಿಜೆಪಿ ಸಂಸದ ಪಿಸಿ ಮೋಹನ್ ಅವರು ಮಾಹಿತಿ ನೀಡಿದ್ದಾರೆ. ಈ ಹಿಂದೆ ಸಂಸದ ತೇಜಸ್ವಿ ಸೂರ್ಯ ಅವರು ಹಳದಿ ಮಾರ್ಗ ಸೇರಿದಂತೆ ವಿಸ್ತರಣೆ ಮಾರ್ಗ ತೆರೆಯುವಂತೆ ನಮ್ಮ ಮೆಟ್ರೋ ಅಧಿಕಾರಿಗಳಿಗೆ ಪತ್ರ ಮುಖೇನ ಮನವಿ ಮಾಡಿದ್ದರು. ಸದ್ಯ ಹಳದಿ ಮಾರ್ಗ ಇನ್ನೂ ಎರಡು ತಿಂಗಳು ತಡವಾಗಬಹುದು ಎಂದು ಹೇಳಲಾಗುತ್ತಿದೆ. ಇದರ ಮಧ್ಯೆ ನಾಗಸಂದ್ರದಿಂದ ಮಾದವರವರೆಗಿನ 3.7 ಕಿಲೋ ಮೀಟರ್ ಮಾರ್ಗವನ್ನು ಸಾರ್ವಜನಿಕರಿಗೆ ಮುಕ್ತಗೊಳ್ಳಲಿದೆ.
ನಮ್ಮ ಮೆಟ್ರೋ ಈ ವಿಸ್ತರಣೆಯ ಹಸಿರು ಹಲವು ಗಡುವು ಮೀರಿ ಕೊನೆಗೆ ಅಂದಾಜು 298 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿತು. ಮಾರ್ಗದಲ್ಲಿ ಪ್ರಾಯೋಗಿಕ ಸಂಚಾರ ಯಶಸ್ವಿಯಾದ ಬಳಿಕ ಇದೇ ಅಕ್ಟೋಬರ್ 3 ಮತ್ತು 4ರಂದು ಮೆಟ್ರೋ ರೈಲು ಸುರಕ್ಷತಾ ಆಯುಕ್ತರು (CMRS), ಅಧಿಕಾರಿಗಳ ನಿಯೋಗ ಭೇಟಿ ನೀಡಿ ಗುಣಮಟ್ಟ, ಪ್ರಯಾಣಿಕರ ಸುರಕ್ಷತೆ ಪರಿಶೀಲಿಸಿತ್ತು. ಬಳಿಕ ವಾಣಿಜ್ಯ ಸಂಚಾರಕ್ಕೆ ಅನುಮೋದನೆ ನೀಡಿತ್ತು.
ಇದಾಗ ಬಳಿಕ ನಮ್ಮ ಮೆಟ್ರೋ ಅಧಿಕಾರಿಗಳು ಈ ಮಾರ್ಗವನ್ನು ಪ್ರಯಾಣಿಕರಿಗೆ ಮುಕ್ತಗೊಳಿಸಲು ಪ್ಲಾನ್ ಮಾಡಿಕೊಂಡಿದ್ದಾರೆ. ಅದರಂತೆ ಇದೇ ಅಕ್ಟೋಬರ್ ಕೊನೆಗೆ ಮೆಟ್ರೋ ಓಡಿಸಲಿದ್ದಾರೆ. ಸದ್ಯ ಮೂರು ನಿಲ್ದಾಣಗಳು ಈ ಮಾರ್ಗದಲ್ಲಿ ನಿರ್ಮಾಣವಾಗಲಿವೆ. ಮಾದಾವರ, ತುಮಕೂರು ರಸ್ತೆ ಕಡೆಯಿಂದ ನಗರ ಪ್ರವೇಶಿಸುವವರಿಗೆ ಈ ವಿಸ್ತರಣೆ ಮಾರ್ಗವು ಅನುಕೂಲ ಕಲ್ಪಿಸಲಿದೆ.